photo courtesy : indiatoday

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೋಟೊ ವನ್ನು ಮಾರ್ಫ್ ಮಾಡಿ ದುರುಪಯೋಗಿಸಿ ಅಪಪ್ರಚಾರ ಮಾಡಿದ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಬಂಧಿಸಲಾಗಿದೆ.

ತಕ್ಕ ಸಮಯಕ್ಕೆ ಮದುವೆಯಾಗದಿದ್ದರೆ ಭಾರೀ ರೀ ದುಷ್ಪರಿಣಾಮ ಎದುರಿಸ ಬೇಕಾಗಬಹುದೆಂದು ಹೇಳಿ ವೆಸ್ಟ್ ಮಿಡ್ನಾಪುರದ ನಿವಾಸಿ ಬಾಬುಯಾ ಘೋಷ್ ಎಂಬಾತ ಮಮತಾ ಬ್ಯಾನರ್ಜಿಯ ಫೋಟೋ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆ ಫೋಟೋ ಅಂಟಿಸಿ ಮಮತಾರನ್ನು ಹೀನಾಯವಾಗಿ ಚಿತ್ರಿಸಿ ಪ್ರಸಾರ ಮಾಡಿದ್ದ. ಮಮತಾರನ್ನು ನಿಂದಿಸಿ ಹಲವು ಲೇಖನಗಳನ್ನು ಬರೆದಿದ್ದ. ಓರ್ವ ಮಹಿಳೆ ಮದುವೆಯಾಗದ್ದರ ಪರಿಣಾಮವನ್ನು ಬಂಗಾಳದ ಜನತೆ ಅನುಭವಿಸುತ್ತಿದೆ ಎಂದೂ ಬರೆದಿದ್ದ.

ಈಗಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಿಯ ಫೋಟೋ ವನ್ನು ಎಡಿಟೆಡ್ ಮತ್ತು ತಿರುಚಿದ ಫೋಟೋ, ಮಾರ್ಫ್ ಮಾಡಿ ದುರುಪಯೋಗಿಸುವುದು ಹೆಚ್ಚಾಗುತ್ತಿದೆ.

Leave a Reply