ಅಲಹಾಬಾದ್‍: ನಗರದ ಬಲ್ಸಾನ್ ಚೈಕಿಯಲ್ಲಿದ್ದ ಪ್ರಥಮ ಪ್ರಧಾನಿ ಜವಹರಲಾಲ ನೆಹರೂರವರ ಪ್ರತಿಮೆಯನ್ನು ತೆಗೆಯಲಾಗಿದೆ. ಮುಂದಿನ ವರ್ಷ ನಡೆಯುವ ಕುಂಭಮೇಳಕ್ಕೆ ಸಂಬಂಧಿಸಿ ನಗರವನ್ನು ಶುಚೀಕರಿಸುವ ಸಲುವಾಗಿ ಈ ಪ್ರತಿಮೆಯನ್ನು ತೆರವುಗೊಳಿಸಲಾಗಿದೆಯೆಂದು ಆಡಳಿತಗಾರರು ತಿಳಿಸಿದ್ದಾರೆ.

ಮುಂದಿನ ವರ್ಷದ ಜನವರಿಯಲ್ಲಿ ಕುಂಭಮೇಳ ಜರಗಲಿದೆ. ಆದರೆ ಅದೇ ರಸ್ತೆಯಲ್ಲಿರುವ ಆರೆಸ್ಸೆಸ್ ನಾಯಕ ದೀನ ದಯಾಳ್ ಉಪಾಧ್ಯಾಯರ ಪ್ರತಿಮೆಯನ್ನು ತೆರವುಗೊಳಿಸಿಲ್ಲ. ಕುಂಭಮೇಳದಲ್ಲಿ ಜನಸಂದಣಿಯ ನಿಯಂತ್ರಣಕ್ಕಾಗಿ ರಸ್ತೆಯ ಮಧ್ಯ ಭಾಗದಲ್ಲಿರುವ ಈ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಹತ್ತಿರದ ಪಾರ್ಕೊಂದರಲ್ಲಿ ನೆಹರೂ ಪ್ರತಿಮೆ ಸ್ಥಾಪಿಸುವುದಾಗಿಯೂ ಆಡಳಿತಗಾರರು ತಿಳಿಸಿದರು.

ಆದರೂ ದೀನದಯಾಳ್ ಉಪಾದ್ಯಾಯರ ಪ್ರತಿಮೆಯನ್ನೇಕೆ ತೆರವುಗೊಳಿಸಲಿಲ್ಲ ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ. ಇದರ ವಿರುದ್ಧ ಕಾಂಗ್ರೆಸ್ ತೀವ್ರ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದೆ. ಇದು ಮಾಜಿ ಪ್ರಧಾನ ಮಂತ್ರಿಗಳನ್ನು ಅವಮಾನಿಸುವಂತಹ ಕೃತ್ಯವೆಂದು ಖಂಡಿಸಿದೆ. ಸಮಾಜವಾದ ಪಕ್ಷ ಮತ್ತು ಕಾಂಗ್ರಸ್ ಪ್ರತಿಭಟನಾ ರ್ಯಾಲಿಯೊಂದನ್ನು ಹಮ್ಮಿಕೊಂಡು ಯೋಗಿ ಆದಿತ್ಯನಾತ್ ವಿರುದ್ಧ ಘೋಷಣೆಗಳನ್ನು ಕೂಗಿತು.

Leave a Reply