ಪೆಟ್ರೋಲ್ ಡೀಸೆಲ್‍ಗೆ ಇತರರನ್ನು ಆಶ್ರಯಿಸುವುದನ್ನು ತಡೆಯಲು ದೇಶದ ಜನರು ಬದಲಿ ಇಂಧನ ಬಳಸಲು ಸಿದ್ದರಾಗಬೇಕೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಕ್ಕಿ ಗೋಧಿ ಮತ್ತು ನಗರ ಮಾಲಿನ್ಯಗಳಿಂದ ಜೈವ ಇಂಧನ ತಯಾರಿಸುವ ಫ್ಯಾಕ್ಟರಿ ಸ್ಥಾಪಿಸುವ ಮೂಲಕ ಪೆಟ್ರೋಲ್ ಡೀಸೇಲ್ ದರ ಇಳಿಸಬಹುದೆಂದು ತಿಳಿಸಿದರು.

ಈಗ ಎಂಟು ಲಕ್ಷ ಕೋಟಿ ರೂಪಾಯಿಯ ಪೆಟ್ರೋಲ್ ಮತ್ತು ಡೀಸೆಲ್ ನ್ನು ದೇಶ ಆಮದು ಮಾಡಿಕೊಳ್ಳುತ್ತಿದೆ. ಅದರ ಬೆಲೆಯೂ ಏರಿಕೆಯಾಗುತ್ತಲೇ ಇದೆ. ರೂಪಾಯಿಯ ಮೌಲ್ಯವೂ ತಗ್ಗುತ್ತಿದೆ. ದೇಶದ ರೈತರು ಆದಿವಾಸಿಗಳು, ಅರಣ್ಯವಾಸಿಗಳನ್ನು ಉಪಯೋಗಿಸಿ ಎಥೆನಾಲ್ ಮಿಥೆನಾಲ್ ಮುಂತಾದುವುಗಳನ್ನು ಉತ್ಪಾದಿಸಿ ಆ ಮೂಲಕ ವಿಮಾನ ಹಾರಾಟ ಕೂಡಾ ನಡೆಸಬಹುದೆಂದೂ ಹೇಳಿದರು. ಈ ವಿಚಾರವನ್ನು ನಾನು ಕಳೆದ ಹದಿನೈದು ವರ್ಷಗಳಿಂದ ಹೇಳುತ್ತಿದ್ದೇನೆಂದೂ ಹೇಳಿದರು.

“ಪೆಟ್ರೋಲಿಯಂ ಸಚಿವಾಲಯವು ಐದು ಎಥೆನಾಲ್ ಫ್ಯಾಕ್ಟರಿ ಸ್ಥಾಪಿಸುವ ಉದ್ದೇಶವಿದೆ. ಅಲ್ಲಿ ಭತ್ತ, ಗೋಧಿ ಕಬ್ಬು ಮುಂತಾದವುಗಳಿಂದ ತೈಲ ಉತ್ಪಾದಿಸುವೆವೆಂದೂ ಹಾಗಾದರೆ ಡೀಸೆಲ್ 50ರೂಪಾಯಿಗೆ ಪೆಟ್ರೋಲ್ 55ರೂಪಾಯಿಗೆ ದೊರೆಯುವುದು ಎಂದು ಹೇಳಿದರು. ಚತ್ತೀಸ್ ಗಢದ ದುರ್ಗಾ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

Leave a Reply